Anandashram High School Frequently Asked Questions (FAQs)
ವಿದ್ಯಾರ್ಥಿಯ ದಾಖಲಾತಿ ಅರ್ಜಿ ಎಲ್ಲಿ ಸಿಗುತ್ತದೆ ?
ವಿದ್ಯಾರ್ಥಿಯ ದಾಖಲಾತಿ ಅರ್ಜಿ ಶಾಲಾ ಕಛೇರಿಯಲ್ಲಿ ಹಾಗೂ ಶಾಲಾ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯ ಸಮಯ ?
ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯು ಎಪ್ರಿಲ್-ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ.
ದಾಖಲಾತಿಯ ನಿಯಮಗಳು ಹೇಗಿವೆ ?
ಏಳನೆಯ ತರಗತಿಯಲ್ಲಿ ಉತ್ತೀರ್ಣರಾದವರನ್ನು ಎಂಟನೆಯ ತರಗತಿಗೆ ಹಾಗೂ ಎಂಟನೆ ತರಗತಿಯಲ್ಲಿ ಉತ್ತೀರ್ಣರಾದವರನ್ನು ಒಂಭತ್ತನೆ ತರಗತಿಗೆ ದಾಖಲಾತಿ ಮಾಡಲಾಗುವುದು.
ಶಾಲಾ ಸಮಯ ?
ಶಾಲಾ ಸಮಯ ಪೂರ್ವಾಹ್ನ ೯.೧೫ ರಿಂದ ಸಾಯಂಕಾಲ ೪.೦೦ ಘಂಟೆಯ ತನಕ .
ವಿದ್ಯಾರ್ಥಿಗಳಿಗೆ ಸಮವಸ್ತ್ರ ಇದೆಯೇ ?
ವಿದ್ಯಾರ್ಥಿಗಳಿಗೆ ಸಮವಸ್ತ್ರ ಇದೆ.
ಸಿ.ಸಿ.ಟಿ.ವಿ. ಇದೆಯೇ ?
ಶಾಲಾ ಆವರಣದಲ್ಲಿ ಸಿ.ಸಿ.ಟಿ.ವಿ. ಸೌಲಭ್ಯ ಇದೆ.
ವಿದ್ಯಾರ್ಥಿಗಳಿಗೆ ಗ್ರಂಥಾಲಯ ವ್ಯವಸ್ಥೆ ಇದೆಯೇ ?
ವಿದ್ಯಾರ್ಥಿಗಳಿಗೆ ಗ್ರಂಥಾಲಯ ವ್ಯವಸ್ಥೆ ಇದೆ.
ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಇದೆಯೇ .
ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಇದೆ. ವಾರಕ್ಕೊಮ್ಮೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನುನಡೆಸಲಾಗುತ್ತದೆ. ಚಿತ್ರಕಲೆ ಮತ್ತು ಕರಕುಶಲ ಕಲೆಗೆ ಹೆಚ್ಚಿನ ಮಾರ್ಗದರ್ಶನ ಹಾಗೂ ತರಭೇತಿ ನೀಡಲಾಗುತ್ತದೆ.
ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಇದೆಯೇ ?
ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಇದೆ. ವಿದ್ಯಾರ್ಥಿಗಳನ್ನು ವಿವಿಧ ಕ್ರೀಡೆಗಳೀಗೆ ತರಭೇತಿ ನೀಡಲಾಗುತ್ತದೆ.
ಎನ್.ಸಿ.ಸಿ/ಎನ್.ಎಸ್.ಎಸ್ ಸೌಲಭ್ಯಗಳಿವೆಯೇ ?
ಎನ್.ಸಿ.ಸಿ/ಎನ್.ಎಸ್.ಎಸ್. ಸೌಲಭ್ಯ ಇದೆ.
ಸರಕಾರದಿಂದ ನೀಡಲಾಗುವ ಸೌಲಭ್ಯಗಳು ಇಲ್ಲಿ ಲಭ್ಯವಿದೆಯೇ?
ಸರಕಾರದಿಂದ ನೀಡಲಾಗುವ ವಿದ್ಯಾರ್ಥಿವೇತನ, ಸೈಕಲ್ ವಿತರಣೆ, ಮಧ್ಯಾಹ್ನ್ದ ಬಿಸಿಊಟ, ಇತ್ಯಾದಿ ಸೌಲಭ್ಯಗಳಿವೆ.
ಮಕ್ಕಳ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಾಗಿದೆಯೇ ?
ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಸುರಕ್ಷಾ ಸಮಿತಿ, ರಕ್ಷಕ-ಶಿಕ್ಷಕ ಸಂಘ ಇತ್ಯಾದಿ ಸೌಲಭ್ಯಗಳಿವೆ.
ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿದೆಯೇ.
ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿದೆ.
ವಿದ್ಯಾರ್ಥಿಯ ದಾಖಲಾತಿಯ ಸಂದರ್ಭದಲ್ಲಿ ಬೇಕಾಗುವ ಅಗತ್ಯ ದಾಖಲೆಗಳು
೧. ಭಾವಚಿತ್ರ
೨. ವರ್ಗಾವಣೆ ಪ್ರಮಾಣ ಪತ್ರ
೩. ಅಂಕ ಪಟ್ಟಿ
೪. ಆರೋಗ್ಯ ಕಾರ್ಡು
೫. ಆಧಾರ್ ಕಾರ್ಡು
೬. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ.
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪುಸ್ತಕದ ವ್ಯವಸ್ಠೆ ಇದೆಯೇ ?
ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಲಾಗುವುದು ಹಾಗೂ ಸರಕಾರದ ವತಿಯಿಂದ ಉಚಿತ ಓದುವ ಪುಸ್ತಕ ನೀಡಲಾಗುವುದು.
ಶಾಲಾ ವಾಹನದ ವ್ಯವಸ್ಠೆ ಇದೆಯೇ ?
ಶಾಲಾ ವಾಹನದ ವ್ಯವಸ್ಠೆ ಇಲ್ಲ.
ಶಾಲಾ ಶುಲ್ಕದ ವಿವರ.
ಶಾಲಾ ಶುಲ್ಕದ ವಿವರವನ್ನು ದಾಖಲಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ತಿಳಿಸಲಾಗುವುದು.