Anandashram High School Information
Rules and Regulations
ಶಾಲೆಯಲ್ಲಿ ಪಾಲಿಸಬೇಕಾದ ನಿಯಮಗಳು
ಶಾಲಾ ಸಮಯ: ಶಾಲೆಯು ಪೂರ್ವಾಹ್ನ ೯.೧೫ ರಿಂದ ೧೨.೩೦ ರ ತನಕ ಅಪರಾಹ್ನ ೧.೩೦ – 4.00 ರ ತನಕ ನಡೆಯುತ್ತದೆ. ಕಾರಣಾಂತರಗಳಿಂದ ತಡವಾಗಿ ಬಂದಲ್ಲಿ ಮುಖ್ಯೋಪಾಧ್ಯಾಯರಿಂದ ಅನುಮತಿ ಪಡೆದ ನಂತರ ಕ್ಲಾಸಿಗೆ ಹೋಗಬೇಕು. ಅನಾರೋಗ್ಯದ ಹೊರತಾಗಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ೪.೦೦ ಘಂಟೆಯ ಮೊದಲು ಕಳುಹಿಸಲು ಅನುಮತಿ ನೀಡುವುದಿಲ್ಲ. ತೀರಾ ಅವಶ್ಯವಿದ್ದಲ್ಲಿ ಹೆತ್ತವರು ಶಾಲೆಗೆ ಬಂದು ಮುಖ್ಯ ಶಿಕ್ಷಕರಿಂದ ಅನುಮತಿ ಪಡೆದು ಕರೆದುಕೊಂಡು ಹೋಗಬಹುದು.
ಶಿಸ್ತು: ಪಾಠ ಅವಧಿಯ ಹಾಗೂ ಪಠ್ಯೇತರ ಸಮಯದಲ್ಲಿಯೂ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಸ್ತು ನಿಯಮಗಳನ್ನು ಪಾಲಿಸಬೇಕು. ಪಾಠ ಆರಂಭವಾಗುವ ಮೊದಲಿನ ಓದುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಕೋಣೆಯಲ್ಲಾಗಲೀ ವಾಚನಾಲಯದಲ್ಲಾಗಲೀ ಮೌನವಾಗಿ ಕುಳಿತು ಅಭ್ಯಾಸದಲ್ಲಿ ನಿರತರಾಗಬೇಕು. ಆಗಾಗ ನಡೆಸಲಾಗುವ ವಿಶೇಷ ತರಗತಿಗಳಿಗೆ ಹಾಜರಾಗಲೇಬೇಕು. ಶಿಸ್ತು ಪರಿಪಾಲನೆಗೆ, ವಠಾರ ಶುಚಿತ್ವಕ್ಕೆ ತಮ್ಮ ತಮ್ಮ ವಸ್ತುಗಳ ಭದ್ರತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಜವಾಬ್ದಾರನಾಗುತ್ತಾನೆ.
ಗೃಹಗಳು: ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರತಾಪ್, ಶಿವಾಜಿ, ಠಾಗೋರ್ ಮತ್ತು ಸುಭಾಷ್ ಎಂಬ ನಾಲ್ಕು ಗೃಹಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು ಗೃಹದ ಚಟುವಟಿಕೆಯು ಇಬ್ಬರು ಅಥವಾ ಮೂವರು ಅಧ್ಯಾಪಕರ ನಿರ್ದೇಶನದಲ್ಲಿ ನಡೆಯುತ್ತದೆ. ಗೃಹ ನಾಯಕ ಗೃಹನಾಯಕಿಯರ ನೇತೃತ್ವದಲ್ಲಿ ಶಿಸ್ತುಪಾಲನೆ, ತರಗತಿ, ಮತ್ತು ಶಾಲಾ ವಠಾರವನ್ನು ಶುಚಿಯಾಗಿಡುವುದರಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹಕರಿಸುವರು.
ಶಾಲಾ ಸಮವಸ್ತ್ರ: ಸರಳತೆ ಮತ್ತು ಸಮಾನತೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಗಿಸುವ ದೃಷ್ಟಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕೆಳಗಿನಂತೆ ಸಮವಸ್ತ್ರಗಳನ್ನು ನಿಗದಿಪಡಿಸಲಾಗಿದೆ.ವಾರದ ಎಲ್ಲಾ ದಿನಗಳಲ್ಲಿಯೂ ಈ ಸಮವಸ್ತ್ರವನ್ನು ಧರಿಸಲೇಬೇಕು. ಸಮವಸ್ತ್ರದೊಂದಿಗೆ ಗುರುತಿನ ಕಾರ್ಡ್ ಕಡ್ಡಾಯ.
ಹುಡುಗರಿಗೆ: ಬೂದು ಪ್ಯಾಂಟ್ ಮತ್ತು ನೀಲಿ ಗೆರೆಯುಳ್ಳ ಅಂಗಿ.
ಹುಡುಗಿಯರಿಗೆ: ಬೂದು ಪ್ಯಾಂಟ್ ಮತ್ತು ನೀಲಿ ಗೆರೆಯುಳ್ಳ ಚೂಡಿದಾರ್
ಹೆತ್ತವರ ಗಮನಕ್ಕೆ: ಹೆತ್ತವರು ಮತ್ತು ರಕ್ಷಕರು ತಮ್ಮ ಪಾಲನೆಯಲ್ಲಿರುವ ಮಕ್ಕಳು ತಪ್ಪದೆ ಸಮಯಕ್ಕೆ ಶಾಲೆಗೆ ಹೋಗುವಂತೆಯೂ ಶಾಲೆ ಬಿಟ್ಟ ನಂತರ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗುವುದರ ಬಗ್ಗೆಯೂ ಗಮನ ಕೊಡಬೇಕು. ದಿನಂಪ್ರತಿ ಮನೆಯಲ್ಲಿ ಪಾಠಗಳ ಅಧ್ಯಯನಕ್ಕೆ ತಕ್ಕ ಗಮನ ಕೊಡುವಂತೆಯೂ ಶಾಲೆಯ ಶಿಸ್ತಿನ ನಿಯಮಗಳನ್ನು ಪಾಲಿಸುವಂತೆಯೂ ನೋಡಿಕೊಂಡು ಸಹಕರಿಸಬೇಕು. ಹೆತ್ತವರು ಹೆಣ್ಣು ಮಕ್ಕಳಿಗೆ ೨ ಜಡೆ ಹೆಣೆದು ಕಳುಹಿಸುವುದರೊಂದಿಗೆ, ಅಗತ್ಯವಿಲ್ಲದ ವಿಷಯಗಳಿಗೆ ಗಮನಕೊಡದಂತೆ ಎಚ್ಚರಿಕೆ ವ್ಹಹಿಸಬೇಕು. ಮನೆ ವಿಳಾಸ, ಫೋನ್ ನಂಬ್ರ ಬದಲಾವಣೆಯಾದಲ್ಲಿ ಶಾಲಾ ಕಛೇರಿಯಲ್ಲಿ ಮಾಹಿತಿ ಕೊಡುವುದು.
ಹಿಂದಿನ ತರಗತಿಯಿಂದ ಉತ್ತೀರ್ಣನಾಗಿ ಬಂದ ವಿದ್ಯಾರ್ಥಿಯಲ್ಲಿ ಈಗಿನ ತರಗತಿಯ ಕಲಿಕೆಗೆ ಬೇಕಾದ ಕನಿಷ್ಠ ಸಾಮರ್ಥ್ಯ/ಕಲಿಕಾಂಶಗಳು ಎಷ್ಠರ ಮಟ್ಟಿಗೆ ಇವೆ ಎಂಬುದನ್ನು ದೃಢ ಪಡಿಸಿಕೊಳ್ಳುವ ಚಟುವಟಿಕೆಯ ಜೊತೆಗೆ ಈಗ ಕಲಿಯುತ್ತಿರುವ ತರಗತಿಗೆ ಬೇಕಾದ ಸಾಮರ್ಥ್ಯ/ಕಲಿಕಾಂಶಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಸೇತುಬಂಧ, ನೈದಾನಿಕ ಪರೀಕ್ಷೆ, ಪರಿಹಾರ ಬೋಧನೆ ನಂತರ ಸಾಫಲ್ಯ ಪರೀಕ್ಷೆಗಳನ್ನು ನಡೆಸಿ ಅವರನ್ನು ಕಲಿಕಾ ಪ್ರಕ್ರಿಯೆಯಲ್ಲಿ ಮುಂದೆ ಸಾಗುವಂತೆ ಪ್ರಯತ್ನಿಸಲಾಗುತ್ತದೆ.
ಸರಕಾರದ ಆದೇಶಕ್ಕನುಗುಣವಾಗಿ ಸೆಮಿಸ್ಟರ್ ಪರೀಕ್ಷಾ ಪದ್ದತಿಯ ಬದಲಾಗಿ ಜುಲೈ ಆಗಸ್ಟು ತಿಂಗಳಲ್ಲಿ ಕಿರು ಪರೀಕ್ಷೆಗಳು, ಮಧ್ಯಂತರ ರಜೆಗೆ ಮೊದಲು ಅರ್ಧವಾರ್ಷಿಕ ಪರೀಕ್ಷೆ, ನವಂಬರ್, ಜನವರಿಯಲ್ಲಿ ಕಿರುಪರೀಕ್ಷೆ, ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರತಿಯೊಂದು ಪರೀಕ್ಷೆಯ ಬಳಿಕ ಮುಖ್ಯಶಿಕ್ಷಕರು, ತರಗತಿ ಶಿಕ್ಷಕರು, ತರಗತಿ ಅಧ್ಯಾಪಕರ ಸಹಿಯೊಂದಿಗೆ ಪ್ರಗತಿ ವರದಿಯನ್ನು ಕೊಡಲಾಗುವುದು. ಪರೀPÉëಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಬಂದು ಪ್ರಗತಿ ವರದಿಗೆ ಸಹಿ ಮಾಡುವುದು ಮತ್ತು ಸಂಬಂದ ಪಟ್ಟ ಅಧ್ಯಾಪಕರಲ್ಲಿ ಮಗುವಿನ ಅಭಿವೃದ್ಧಿಯ ಬಗ್ಗೆ ವಿಚಾರ ವಿನಿಮಯ ಮಾಡಬೇಕು. ೧೦ನೇ ತರಗತಿಯ ವಿದ್ಯರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ ನಡೆಸಲಾಗುತ್ತದೆ. ತರಗತಿಗಳಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಿರಲು ಹೆತ್ತವರು ಸಹಕಾರ ಕೊಡ ಬೇಕು.
ವಿದ್ಯಾರ್ಥಿಗಳ ಹಾಜರಾತಿಯೂ ಕೂಡ ಫಲಿತಾಂಶದ ಪ್ರಗತಿಯ ದೃಷ್ಠಿಯಿಂದ ಬಹುಮುಖ್ಯವಾದುದು. ಆದ್ದರಿಂದ ವಿದ್ಯಾರ್ಥಿಗಳು ಗೈರು ಹಾಜರಾಗದೆ ನಿತ್ಯ ಶಾಲೆಗೆ ಬರಬೇಕು. ಅನಿವಾರ್ಯವಾದ ಕಾರಣಗಳಿಗೆ ರಜೆ ಮಾಡಿದಾಗ ಕ್ಯಾಲೆಂಡರಿನಲ್ಲಿ ರಜೆಯ ಕಾರಣಗಳನ್ನು ಬರೆದು ಹೆತ್ತವರ ಸಹಿ ಹಾಕಿಸಿ, ಮುಖ್ಯ ಶಿಕ್ಷಕರ ಸಹಿ ಪಡೆದು ತರಗತಿಯ ಶಿಕ್ಷಕರ ಅನುಮತಿಯೊಂದಿಗೆ ತರಗತಿಯಲ್ಲಿ ಹಾಜರಾಗಬೇಕು.
೮ನೇ ತರಗತಿಯ ಆರೋಗ್ಯವಂತ ಹುಡುಗರು ಎನ್.ಸಿ.ಸಿ. ಸೇರುವುದನ್ನು ನಿರೀಕ್ಷಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸರಕಾರದ ಉಚಿತ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇದೆ ಹಾಗೂ ದಾನಿಗಳ ನೆರವಿನಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಲಾಗುವುದು.
ಪುಸ್ತಕ ಭಂಡಾರ ಮತ್ತು ವಾಚನಾಲಯ: ವಿದ್ಯಾರ್ಥಿಗಳು ತಮ್ಮ ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಸಲುವಾಗಿ ಶಾಲೆಯಲ್ಲಿ ಯೋಗ್ಯವಾದ ಪುಸ್ತಕ ಭಂಡಾರ ಮತ್ತು ವಾಚಾನಾಲಯವಿದೆ. ವಿದ್ಯಾರ್ಥಿಗಳು ಇಲ್ಲಿಂದ ತಾವು ಪಡೆದ ಪುಸ್ತಕಗಳನ್ನು ಜಾಗರೂಕತೆಯಿಂದ ಉಪಯೋಗಿಸಿ, ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕು. ಪುಸ್ತಕ ಹಾಳಾದರೆ ಅಥವಾ ಕಳೆದು ಹೋದರೆ ಅಂತಹ ಪುಸ್ತಕದ ಬೆಲೆಯನ್ನುತೆರಬೇಕಾಗುವುದು. ಶಾಲಾ ವಾಚನಾಲಯಕ್ಕೆ ಕನ್ನಡ, ಇಂಗ್ಲೀಷ್ ಭಾಷೆಯ ದೈನಿಕ ಸಾಪ್ತಾಹಿಕ ಮತ್ತು ಮಾಸಿಕ ಪತ್ರಿಕೆಗಳನ್ನು ತರಿಸಲಾಗುವುದು. ಎಲ್ಲರಿಗೂ ಅವಕಾಶ ಸಿಗುವಂತೆ ಇದನ್ನು ಉಪಯೋಗಿಸಬೇಕಲ್ಲದೆ ಯಾವುದೇ ತರದ ಹಾನಿಯುಂಟು ಮಾಡಿದರೆ ದಂಡ ತೆರಬೇಕಾಗುವುದು.
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳ ಪ್ರಕಾಶನಕ್ಕೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ, ಕ್ರೀಡಾ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆರಿಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ರಕ್ಷಕ -ಶಿಕ್ಷಕ ಸಂಘ: ಶಾಲಾ ವಿದ್ಯಾರ್ಥಿಗಳ ಪ್ರಗತಿ ಮತ್ತು ಗುಣ ನಡತೆಯ ಕುರಿತು ರಕ್ಷಕರು ಮತ್ತು ಶಿಕ್ಷಕರು ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಶಾಲೆಯಲ್ಲಿ ರಕ್ಷಕ -ಶಿಕ್ಷಕ ಸಂಘವಿದೆ. ಈ ಸಂಘದ ಸಭೆಗಳಿಗೆ ಹೆತ್ತವರು ಕಡ್ಡಾಯವಾಗಿ ಹಾಜರಾಗಬೇಕಾಗಿ ವಿನಂw.
ಶೈಕ್ಷಣಿಕ ಮಾಹಿತಿ ಸಭೆ: ೮ನೇ, ೯ನೇ, & ೧೦ನೇ ತರಗತಿಯ ವಿದ್ಯಾರ್ಥಿಗಳ ಹೆತ್ತವgÀÄ ಕ್ಯಾಲೆಂಡರಿನಲ್ಲಿ ನಮೂದಿಸಿದ ದಿನದಂದು ಬೆಳಿಗ್ಗೆ ೯.೩೦ ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕಾಗಿ ವಿನಂತಿ.
Special Class and Remedial Classes
Students who are slow learners or need special attention are encouraged to enhance their performance through special and remedial classes which are organized prior to the 10th standard Board Examinations.
Access to Counsellor:
On a need basis the school can provide access, and refer students to an empanelled Counsellor.
What comes easy, won’t last long.
And what lasts long, won’t come easy.