Anandashram High School Admissions

Admission Process

ಸಾರಸ್ವತ ವಿದ್ಯಾಸಂಸ್ಥೆ(ರಿ.) ಮಂಗಳೂರು ,ಇವರು ಸೋಮೇಸ್ವರ ಕೋಟೆಕಾರು ಮತ್ತು ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಒದಗಿಸುವ ಉದ್ದೇಶದಿಂದ ೧೯೪೬ ರಲ್ಲಿ ಈ ಶಾಲೆಯನ್ನು ಆರಂಭಿಸಿ ಬಹಳ ಮುತುವರ್ಜಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಸುಮಾರು 69 ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘವು ಕಾರ್ಯನಿರ್ವಹಿಸುತ್ತಿದ್ದು, ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ. ನಮ್ಮ ಶಾಲೆಯ ಹಳೆ ವಿಧ್ಯಾರ್ಥಿಗಳು ಹಳೆ ವಿಧ್ಯಾರ್ಥಿ ಸಂಘದ ಮೂಲಕ

ದಾಖಲಾತಿಯ ವಿವರ

ಸಾರಸ್ವತ ವಿದ್ಯಾಸಂಸ್ಥೆ(ರಿ) ಮಂಗಳೂರು ಇದರ ಆಡಳಿತಕ್ಕೊಳಪಟ್ಟ ಶಿಕ್ಷಣ ಇಲಾಖೆಯ ಅನುಮತಿ ಮೇರೆಗೆ ಪ್ರಸ್ತುತ ಎಂಟನೇ, ಒಂಭತ್ತನೇ ಮತ್ತು ಹತ್ತನೇ ತರಗತಿಗಳು ನಡೆಯುತ್ತಿವೆ. ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಿಂದ ಬರುವ ಕನ್ನಡ/ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತು ಏಳನೆಯ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಂಟನೆಯ ತರಗತಿಗೆ ಹಾಗೂ ಎಂಟನೆ ತರಗತಿಯಲ್ಲಿ ಉತ್ತೀರ್ಣರಾದವರಿಗೆ ಒಂಭತ್ತನೆ ತರಗತಿಗೆ ದಾಖಲಾತಿ ನೀಡಲಾಗುತ್ತದೆ.

ದಾಖಲಾತಿ ಬಯಸುವ ವಿದ್ಯಾರ್ಥಿಗಳು ಶಾಲಾ ಕಛೇರಿಯಿಂದ ಹಾಗೂ ಶಾಲಾ ವೆಬ್ ಸೈಟ್ ನಿಂದ ದಾಖಲಾತಿ ಅರ್ಜಿಯನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ತುಂಬಿಸಿ ಪೋಷಕರ ಸಹಿಯೊಂದಿಗೆ ಹಿಂದಿನ ತರಗತಿಯ ವರ್ಗಾವಣೆ ಪ್ರಮಾಣ ಪತ್ರ, ಅಂಕಪಟ್ಟಿ, ಆರೋಗ್ಯಕಾರ್ಡು, ಆಧಾರ್ ಕಾರ್ಡು, ಜಾತಿ ಆದಾಯ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡು, ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ಹಾಗೂ ಒಂದು ಫೋಟೋ ಈ ಎಲ್ಲಾ ದಾಖಲೆಗಳೊಂದಿಗೆ ಕಛೇರಿಗೆ ಅರ್ಜಿಯನ್ನು ಸಲಿಸುವುದು.

ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಿ ಶಾಲೆಗೆ ದಾಖಲಾತಿಯನ್ನು ಪಡೆದುಕೊಳ್ಳಬಹುದಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಹಿಂದಿನ ತರಗತಿಯ ವರ್ಗಾವಣೆ ಪ್ರಮಾಣ ಪತ್ರ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಂದ ಮೇಲುರುಜು ಮಾಡಿಸುವುದು ಕಡ್ದಾಯವಾಗಿರುತ್ತದೆ. ಹೊರರಾಜ್ಯದಿಂದ ಬರುವ ವಿದ್ಯಾರ್ಥಿಗಳು ಇಲಾಖೆಯ ಸೂಚನೆಯಂತೆ ಹೆಚ್ಚುವರಿ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಇಲಾಖೆ ನಿಗದಿ ಪಡಿಸುವ ಶಾಲಾ ಶುಲ್ಕದ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ.

SCHOOL APPLICATION FORM

Download the application form for admission to Anandashram High School.